ಕಲಿಕಾ ಸಂಪನ್ಮೂಲಗಳ ‘ಇ-ಸಿರಿ’ ವೆಬ್ ಭಂಡಾರ, ಡಿವಿಡಿ ಲೋಕಾರ್ಪಣೆ:
“ಆನ್ಲೈನ್ ಕಲಿಕೆಗೆ ಸ್ವಪ್ರೇರಣೆ ಅತ್ಯವಶ್ಯ”
-ಜಾನೆಕುಂಟೆ ಬಸವರಾಜ್
ಅವರು ಎಂಜಿನಿಯರಿಂಗ್ ಮತ್ತು ಎಂಬಿಎ ವಿದ್ಯಾರ್ಥಿಗಳಿಗಾಗಿ
ಪಿಡಿಐಟಿ ಅಧ್ಯಾಪಕ ವರ್ಗ ಸಿದ್ಧಪಡಿಸಿರುವ ಸಂಪನ್ಮೂಲಗಳ
‘ಇ-ಸಿರಿ’ ವೆಬ್ ಆವೃತ್ತಿ ಹಾಗೂ ಡಿವಿಡಿಗಳನ್ನು
ಲೋಕಾರ್ಪಣೆಗೊಳಿಸಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ, 26ರಂದು ಮಂಗಳವಾರ ಮಧ್ಯಾಹ್ನ ವೀಡಿಯೊ
ಕಾನ್ಫೆರೆನ್ಸ್ ಸಂವಾದದಲ್ಲಿ ಮಾತನಾಡುತ್ತಿದ್ದರು.
“ಭಾರತದಲ್ಲಿ ದೂರಸಂಪರ್ಕ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಬೇಕಿದ್ದು ನೆಟ್ವರ್ಕ್ ಸಮಸ್ಯೆ ಸಾಮಾನ್ಯ. ಗ್ರಾಮೀಣ ಭಾಗದ 20-25 ಪ್ರತಿಶತ ವಿದ್ಯಾರ್ಥಿಗಳು ಇಂಟರ್ನೆಟ್ ಸೌಲಭ್ಯವಿಲ್ಲದೆ ಆನ್‌ಲೈನ್ ಶಿಕ್ಷಣ ವಂಚಿತರಾಗಬಹುದು. ಅದಕ್ಕಾಗಿ ಅಂತಹ ವಿದ್ಯಾರ್ಥಿಗಳಿಗೆ ಇ-ಸಂಪನ್ಮೂಲಗಳ ಸಂಗ್ರಹ ಸಿದ್ಧಪಡಿಸಿ ಒದಗಿಸಲಾಗಿದೆ” ಎಂದು ಅವರು ಹೇಳಿದರು.
ಪಿಡಿಐಟಿ ಪ್ರಾಚಾರ್ಯ ಡಾ. ಎಸ್.ಎಂ.ಶಶಿಧರ್ ಮಾತನಾಡಿ
“ಕೋರೋನಾ ಸಂಕ್ರಾಮಿಕ ಪಿಡುಗಿನ ವೇಳೆ
ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಲಭ್ಯವಿದ್ದ ಒಂದೇ
ಒಂದು ಆಯ್ಕೆ ಎಂದರೆ ಅದು ಆನ್‌ಲೈನ್ ಬೋಧನೆ. ಶಿಕ್ಷಣದಲ್ಲಿ ತರಗತಿ ಮತ್ತು ಶಿಕ್ಷಕರಿಗೆ ಪರ್ಯಾಯವಿಲ್ಲ. ಕಡಿಮೆ ವೆಚ್ಚ, ಸಮಯದ ಉಳಿತಾಯ, ಆಧುನಿಕ ಪೀಳಿಗೆ ಡಿಜಿಟಲ್
ಸ್ನೇಹಿಯಾಗಿರುವುದು ಆನ್‌ಲೈನ್ ಶಿಕ್ಷಣ
ಭವಿಷ್ಯದ ಶಿಕ್ಷಣ ವಿಧಾನವಾಗುವುದು ದೃಢವಾಗುತ್ತಿದೆ. ಅದರೂ, ಆನ್‌ಲೈನ್ ಶಿಕ್ಷಣ, ಸಾಂಪ್ರಧಾಯಿಕ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿರಬೇಕೇ ಹೊರತು
ಪರ್ಯಾಯವಾಗದು.” ಎಂದು ಅವರು ಅಭಿಪ್ರಾಯಪಟ್ಟರು.
.
ಇ-ಸಂಪನ್ಮೂಲಗಳಲ್ಲಿ, ಪಿಡಿಎಫ್ ನೋಟ್ಸ್ಗಳು, ಪಿಪಿಟಿ, ಬೋಧನೆಯ ವೀಡಿಯೊಗಳು, ಪ್ರಯೋಗಾಲಯದ ಪ್ರಯೋಗಗಳ ವಿಡಿಯೋಗಳು ಮತ್ತು ಇನ್ನೂ ಅನೇಕವು ಸೇರಿವೆ. ದೂರದ ಹಳ್ಳಿಯಲ್ಲಿರುವ ವಿದ್ಯಾರ್ಥಿಗಳು ಇಂಟರ್ನೆಟ್ ಸೌಲಭ್ಯವಿದ್ದಾಗ,
ತಮ್ಮ ಅನುಕೂಲಕರ ಸಮಯದಲ್ಲಿ ಈ ಇ-ಸಂಪನ್ಮೂಲಗಳನ್ನು
ಅಭ್ಯಸಿಸಬಹುದಾಗಿದೆ. ಆನ್‌ಲೈನ್ ಬೋಧನೆಗೆ ಶಿಕ್ಷಕರಿಗೆ ವಿಷಯವಾರು ಸಂಪನ್ಮೂಲಗಳು ಅತ್ಯವಶ್ಯ.
ಅದ್ದರಿಂದ ಯಾವುದೇ
ಕಾಲೇಜಿನ ಶಿಕ್ಷಕರೂ ಇ–ಸಿರಿ ಬಳಸಿಕೊಳ್ಳಬಹುದಾಗಿದೆ ಎಂದು ಡಾ. ಎಸ್.ಎಂ.ಶಶಿಧರ್ ತಿಳಿಸಿದರು. ಈ ಸಂದರ್ಭದಲ್ಲಿ ವಿಭಾಗಗಳ ಮುಖ್ಯಸ್ಥರು ಮತ್ತು
ಸಿಬ್ಬಂದಿ ಉಪಸ್ಥಿತರಿದ್ದರು.