VTU sponsored State level workshop on IOT at PDIT

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಹೊಸಪೇಟೆ
*VTU sponsored State level workshop on IOT at PDIT Hosapete*
*ವಿ.ಟಿ.ಯು. ಪ್ರಾಯೋಜಿತ ರಾಜ್ಯಮಟ್ಟದ ಐ.ಓ.ಟಿ  ಕಾರ್ಯಾಗಾರ*
ದಿನಾಂಕ: 2&3/11/2019
          
ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿ.ಟಿ.ಯು. ಪ್ರಾಯೋಜಿತ ಟೆಕ್ಯುಪ್ 1.3 ಯೋಜನೆ ಅಡಿಯಲ್ಲಿಐ.ಓ.ಟಿ (Internet of Things) ವಿಷಯದ ಮೇಲೆ ರಾಜ್ಯಮಟ್ಟದ ಎರಡು ದಿನಗಳ  ಕಾರ್ಯಾಗಾರವನ್ನು  ದಿನಾಂಕ 2 ಹಾಗೂ 3 ನವೆಂಬರ್  2019 ಶನಿವಾರ  ಹಾಗು ಭಾನುವಾರದಂದು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ  ಐ.ಓ.ಟಿ ಕ್ಷೇತ್ರದಲ್ಲಿ ಉದ್ಯೋಗ ಪರಿಣಿತಿಯನ್ನು ಹೆಚ್ಚಿಸಲು ಸಹಾಯಕಾರಿಯಾಗಲಿದೆ.  ಬೆಂಗಳೂರು , ಮೈಸೂರು , ಶಿವಮೊಗ್ಗ, ಬೀದರ್, ದಾವಣಗೆರೆ ಮುಂತಾದ ವಿವಿಧ ಭಾಗಗಳಿಂದ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
 
ಈ ಕಾರ್ಯಾಗಾರದ ಉದ್ಘಾಟನೆಯನ್ನು ಬೆಂಗಳೂರಿನ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಬಾಲಕೃಷ್ಣ .ಆರ್ ಹಾಗು ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ವೆಂಕಟೇಶ್  ಅವರು  ದಿನಾಂಕ: 2/11/2019 ರಂದು ಬೆಳಿಗ್ಗೆ 9.00 ಗಂಟೆಗೆ  ನೆರವೇರಿಸಲಿದ್ದಾರೆ. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು    ಪಿ.ಡಿ.ಐ.ಟಿ. ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಜಾನೇಕುಂಟೆ ಬಸವರಾಜ್ ಅವರು  ವಹಿಸಲಿದ್ದಾರೆ, ಆಡಳಿತ ಮಂಡಳಿಯ ಸದಸ್ಯರುಗಳಾದ ಶ್ರೀ ಏಕಾಮರೇಶ ತಾಂಡೂರ ಮತ್ತು ಶ್ರೀ ಜೆ.ಎಸ್. ಸತೀಶ್,  ಕಂಪ್ಯೂಟರ್ ಸೈನ್ಸ್  ವಿಭಾಗದ ಮುಖ್ಯಸ್ಥರಾದ ಪ್ರೊ. ವಸಂತಮ್ಮ .ಹೆಚ್ ಹಾಗೂ ಕಾರ್ಯಾಗಾರದ  ಸಂಚಾಲಕರಾದ ಪ್ರೊ.ಮಾಲತೇಶ್.ಕೆ  ಉಪಸ್ಥಿತರಿರುತ್ತಾರೆ ಎಂದು ಪ್ರಾಂಶುಪಾಲ ಡಾ. ಎಸ್.ಎಂ. ಶಶಿಧರ್ ತಿಳಿಸಿರುತ್ತಾರೆ.