“ನವೀಕರಿಸಬಹುದಾದ ಇಂಧನ; ಭಾರತದಸಾಮರ್ಥ್ಯಅಪಾರ”



ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಹೊಸಪೇಟೆ

ಮರಿಯಮ್ಮನಹಳ್ಳಿಯಲ್ಲಿ ನವೀಕರಿಸಬಹುದಾದ ಶಕ್ತಿ ಮೂಲಗಳ ಬಗೆಗೆ ಜಾಗೃತಿ ಅಭಿಯಾನ

ನವೀಕರಿಸಬಹುದಾದ ಇಂಧನಭಾರತದ ಸಾಮರ್ಥ್ಯ ಅಪಾರ

 -ಡಾ.ಎಸ್.ಎಂ.ಶಶಿಧರ್

ಮರಿಯಮ್ಮನಹಳ್ಳಿ ೧೨ ನವೆಂಬರ್ ೨೦೧೯

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಸಾಮರ್ಥ್ಯವು ಅಪಾರವಾಗಿದ್ದುವಿಶ್ವದಲ್ಲೇ ಐದನೇ ಸ್ಥಾನವನ್ನು ಹೊಂದಿದೆ ಎಂದು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ.ಎಸ್.ಎಂ.ಶಶಿಧರ್ ಅವರು ತಿಳಿಸಿದರು.

ಅವರು ಮರಿಯಮ್ಮನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಪಿಡಿಐಟಿಯ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗವು ಆಯೋಜಿಸಿದ್ದ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮಾತನಾಡುತ್ತಿದ್ದರು.

ಸಾಕಷ್ಟು ಸೂರ್ಯನ ಬೆಳಕು ಮತ್ತು ಪವನ ಶಕ್ತಿಯ ಸಾಮರ್ಥ್ಯವನ್ನು ಪಡೆದಿರುವ ಭಾರತ ನವೀಕರಿಸಬಹುದಾದ ಕ್ಷೇತ್ರದಲ್ಲಿ ವಿಶ್ವದಲ್ಲೇ ಅಗ್ರಗಣ್ಯ ಸ್ಥಾನ ಪಡೆಯುವತ್ತ ಮುನ್ನಡೆದಿರುವುದು ಹೆಮ್ಮೆಯ ಸಂಗತಿಯಾಗಿದೆಸೌರ ಹಾಗೂ ಪವನ ವಿದ್ಯುತ್ ಶಕ್ತಿಯಿಂದ ಮಾಲಿನ್ಯ ಕಡಿಮೆಯಾಗುವುದುಪರಿಸರಸ್ನೇಹಿ ಯಾಗಿದ್ದು  ಶಕ್ತಿ ಮೂಲಗಳು ಮನುಕುಲಕ್ಕೆ ಸದಾ ಲಭ್ಯವಾಗುವಂತಹವಾಗಿರುತ್ತದೆ. 2022  ವೇಳೆಗೆ ಭಾರತ 200 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಗಡಿ ದಾಟಲಿದೆಭಾರತದಲ್ಲಿ ಸ್ಥಾಪಿಸಲಾದ ವಿದ್ಯುತ್ ಉತ್ಪಾದನೆಯಲ್ಲಿ ಶೇಕಡಾ 55 ಕ್ಕಿಂತ ಹೆಚ್ಚು 2030  ವೇಳೆಗೆ ನವೀಕರಿಸಬಹುದಾದ ಮೂಲಗಳಿಂದ ಬರಲಿದೆ ಎಂದು ಅವರು ಹೇಳಿದರು.

ವಿದ್ಯುತ್ ವಿಭಾಗದ ಪ್ರಾಧ್ಯಾಪಕರಾದ ಕೆ.ಮಧ್ವರಾಜ್ ಮಾತನಾಡಿ ಶಾಲಾ ವಿದ್ಯಾರ್ಥಿಗಳಿಗೆ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ ಬಗ್ಗೆಮುಖ್ಯವಾಗಿ ಸೌರಶಕ್ತಿ ಹಾಗೂ ಪವನ ಶಕ್ತಿಯ ಬಳಕೆಯ ಅಗತ್ಯ ಇಂದಿನ ಪೀಳಿಗೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆಸಾಂಪ್ರದಾಯಿಕ ಇಂಧನಗಳಾದ ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳಿಂದ ವಿದ್ಯುತ್ ಉತ್ಪಾದಿಸುವ ಬಗೆಯನ್ನು ಕಡಿಮೆ ಮಾಡಿಗ್ರಾಮೀಣ ವಿಭಾಗದ ಜನರಿಗೆ ಸೌರಶಕ್ತಿ ಬಳಕೆ ಹಾಗೂ ಸೌರಶಕ್ತಿ ಆಧಾರಿತ ಮೇಲ್ಚಾವಣಿಗಳನ್ನು ಅಳವಡಿಸಿಕೊಂಡು ತಾವೇ ವಿದ್ಯುತ್ತನ್ನು ಉತ್ಪಾದಿಸಿ ಬಳಸುವಲ್ಲಿ ಮುಂದಾಗಬೇಕುಇದರಿಂದ ಸಾಂಪ್ರದಾಯಿಕ ಇಂಧನಗಳ ಅವಲಂಬನೆಯಿಂದ ಮುಕ್ತ ಗೊಳ್ಳಬಹುದೆಂದು ಅಭಿಪ್ರಾಯಪಟ್ಟರು.

 ಪಿಡಿಐಟಿ ವಿದ್ಯುತ್ ವಿಭಾಗದ ಮುಖ್ಯಸ್ಥರಾದ ಡಾಪ್ರದೀಪ್ ಬಿ ಜ್ಯೋತಿಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ರತ್ನಾಕರದುರ್ಗಮ್ಮ,ಆರೀಫ್ ಬೇಗಂ ಅವರು ಉಪಸ್ಥಿತರಿದ್ದರು ಕಾರ್ಯಕ್ರಮದ ನಿರ್ವಹಣೆಯನ್ನು ಪ್ರವೀಣ್ ಕುಮಾರ್ ಹಾಗೂ ಶ್ರೀಲಯ ನಿರೂಪಿಸಿದರು , ಉಪೇಂದ್ರ ಸ್ವಾಗತಿಸಿದತರುಸೀಮಾ ವಂದಿಸಿದರುವಿಜಯೇಂದ್ರ ಸೌರ ಫಲಕಗಳ ಬಳಕೆಯ ಉಪಯುಕ್ತತೆಯನ್ನು ಶಾಲಾ ಮಕ್ಕಳಿಗೆ ಪ್ರದರ್ಶಿಸಿದರುಕಾರ್ಯಕ್ರಮದಲ್ಲಿ ಐದು ನೂರಕ್ಕೂ ಹೆಚ್ಚು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.