ಇಂಜಿನಿಯರ್ಸ್ ದಿನಾಚರಣೆ ಸಮಾರಂಭ
ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ
ಹೊಸಪೇಟೆ ೧೪-೦೯-೨೦೧೯
ಮುನಿರಾಬಾದ್ ನ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಂಸ್ಥೆ ವತಿಯಿಂದ ದಿನಾಂಕ ೧೫ ಸಪ್ಟೆಂಬರ್ ೨೦೧೯ ರಂದು ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಸಂದರ್ಭದಲ್ಲಿ ‘ಎಂಜಿನಿಯರ್ಸ್ ದಿನಾಚರಣೆ’ಯನ್ನು ಬೆಳಗ್ಗೆ ೧೦.೩೦ ಗಂಟೆಗೆ ಮುನಿರಾಬಾದ್ ನ ಸರ್ ಎಂ ವಿಶ್ವೇಶ್ವರಯ್ಯ ಶತಮಾನೋತ್ಸವ ಸಭಾಂಗಣದಲ್ಲಿ ಆಚರಿಸಲಾಗುವುದು.
ಅಧ್ಯಕ್ಷತೆ ಶ್ರೀ ಪ್ರಹಲಾದ, ಸೂಪರಿಂಟೆಂಡಿಂಗ್ ಎಂಜಿನಿಯರ್, ಕೆಪಿಟಿಸಿಎಲ್, ಮುನಿರಾಬಾದ್ ವೃತ್ತ ಹಾಗೂ ಅಧ್ಯಕ್ಷರು ಮುನಿರಾಬಾದ್ ನ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್, ಮುಖ್ಯ ಅತಿಥಿಗಳಾಗಿ ಡಾ.ಎಸ್.ಎಂ. ಶಶಿಧರ್, ಪ್ರಾಚಾರ್ಯರು, ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಹೊಸಪೇಟೆ, ಗೌರವಾನ್ವಿತ ಅತಿಥಿಗಳಾಗಿ ಶ್ರೀ ಕಟ್ಟಾ ಅಖಿಲ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ‘ಬದಲಾವಣೆಗಾಗಿ ತಾಂತ್ರಿಕತೆ’ ವಿಷಯದ ಕುರಿತು ಡಾ.ಎಸ್.ಎಂ. ಶಶಿಧರ್, ಡಾ.ಬಿ.ಎಚ್. ಮಂಜುನಾಥ್, ಪ್ರೊ.ಮಾಲತೇಶ್ ಕಮತರ್ ಅವರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ.
ಡಾ ಮೇದ ವೆಂಕಟಯ್ಯ, ಎಂಎಸ್ ಪಿಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ರಾಯಚೂರಿನ ಆರ್ ಎಸ್ ಕಡಗದ್ ಅವರನ್ನು ಸನ್ಮಾನಿಸಲಾಗುವುದು. ಇಂಜಿನಿಯರ್ಸ್ ದಿನಾಚರಣೆಯ ಪ್ರಯುಕ್ತ ಪಿಡಿಐಟಿಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದೆ ಎಂದು ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಂಸ್ಥೆಯ ಕಾರ್ಯದರ್ಶಿ ಡಬ್ಲ್ಯೂ ಲಲಿತ್ ಪ್ರಸಾದ್ ಅವರು ತಿಳಿಸಿದ್ದಾರೆ.