ಪ್ರೌಢದೇವರಾಯ ತಾಂತ್ರಿಕ
ಮಹಾವಿದ್ಯಾಲಯ,
ಹೊಸಪೇಟೆ
ದಿ 02-03-2019,
ಶನಿವಾರ
____________________________________________________
ಪಿಡಿಐಟಿಯಲ್ಲಿ ವಲಯಮಟ್ಟದ ಇಂಜಿನಿಯರಿಂಗ್
ಕಾಲೇಜುಗಳ ಪುರುಷರ ಖೋ-ಖೋ ಪಂದ್ಯಾವಳಿ
ಭಾರತದ ಸಾಂಪ್ರದಾಯಿಕ ಕ್ರೀಡೆಗಳಿಗೆ
ಪ್ರಾಶಸ್ತ್ಯ ಅಗತ್ಯ
-
ಕರ್ನಾಟಕ ಕ್ರೀಡಾ ಪ್ರಾಧಿಕಾರದ ಖೋ-ಖೋ ತರಬೇತಿದಾರ ಯತಿರಾಜ್
_______________________________________________________________________________
ಹೊಸಪೇಟೆ:
ಪ್ರೌಢದೇವರಾಯ
ತಾಂತ್ರಿಕ ಮಹಾವಿದ್ಯಾಲಯವು ಆಯೋಜಿಸಿರುವ ಎರಡು ದಿನಗಳ ಕಲಬುರಗಿ ವಲಯಮಟ್ಟದ ಇಂಜಿನಿಯರಿಂಗ್ ಕಾಲೇಜುಗಳ
ಪುರುಷರ ಖೋ-ಖೋ ಪಂದ್ಯಾವಳಿ ಶುಕ್ರವಾರ ಮತ್ತು ಶನಿವಾರ ಜರುಗಿತು..
ಕರ್ನಾಟಕ ಕ್ರೀಡಾ ಪ್ರಾಧಿಕಾರದ ಖೋ ಖೋ ತರಬೇತಿದಾರರಾದ ಯತಿರಾಜ್ ಎನ್ ಅವರು ಖೋ-ಖೋ
ಪಂದ್ಯಾವಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ''ಮನುಷ್ಯ
ತನ್ನ ದೇಹವನ್ನು ಸದೃಢವಾಗಿ ಕಾಪಾಡಿಕೊಳ್ಳಬೇಕಾದರೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು.
ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ಖೋ ಖೋ ಭಾರತದ ದೇಶಿಯ ಕ್ರೀಡೆಯಾಗಿದ್ದು, ದೇಹ
ಮನಸ್ಸುಗಳಿಗೆ ಉತ್ಸಾಹ ಹಾಗು ಚೈತನ್ಯ ತುಂಬುವ ಆಟವಾಗಿದೆ, ಕ್ರಿಕೆಟ್ ಮಾತ್ರವೇ ಕ್ರೀಡೆ
ಎಂದುಕೊಳ್ಳುವ ಯುವಜನರ ಮಧ್ಯೆ ಎಂಜಿನೀಯರಿಂಗ್ ವಿದ್ಯಾರ್ಥಿಗಳು ಖೋ ಖೋ ಆಟವಾಡುತ್ತಿರುವುದು
ಸಂತಸದ ಸಂಗತಿ” ಎಂದರು.
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಎಂ.ಶಶಿಧರ್
ಮಾತನಾಡಿ “ಭಾರತದಲ್ಲಿ ಪ್ರಚೀನಕಾಲದಿಂದಲೂ ಖೋ ಖೋ ಆಟ ಪ್ರಚಲಿತವಾಗಿದೆ. ಮುಂಬರುವ ಏಶಿಯನ್
ಕ್ರೀಡೆಗಳಲ್ಲಿ ಖೋ-ಖೋ ಮೊದಲ ಬಾರಿಗೆ ಸೇರ್ಪಡೆಗೊಳ್ಳುತ್ತಿದೆ. ಕಬಡ್ಡಿಯಂತೆ ಖೋ-ಖೋ ಸಹಾ ಅಂತರಾಷ್ಟ್ರೀಯ ಮನ್ನಣೆ
ಗಳಿಸುವತ್ತ ಸಾಗುತ್ತಿದೆ. ಪಿಡಿಐಟಿಯು ದೇಶೀಯ ಸಾಂಪ್ರದಾಯಿಕ
ಕ್ರೀಡೆಗಳನ್ನು ಉತ್ತೇಜಿಸಲು ಇಂಥ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳುತ್ತಿದೆ”
ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಜಾನೇಕುಂಟೆ ಬಸವರಾಜ ಮಾತನಾಡಿ ಆಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಒಳ್ಳೆಯ ಪ್ರದರ್ಶನ ನೀಡುವುದು ಮುಖ್ಯ. ವಿದ್ಯಾರ್ಥಿಗಳು ದಿನದಲ್ಲಿ ಕೆಲವು
ನಿಮಿಷಗಳಾದರೂ ಆಟ, ವ್ಯಾಯಾಮಗಳಲ್ಲಿ
ತೊಡಗಿಸಿಕೊಳ್ಳಬೇಕು. ವಿದ್ಯೆ ಮತ್ತು ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳು. ಇವುಗಳನ್ನು
ಜೀವನದಲ್ಲಿ ಮೈಗೂಡಿಸಿಕೊಳ್ಳುವ ಕೆಲಸವನ್ನು ಮಾಡಬೇಕು’’ಎಂದು ಹೇಳಿದರು.
ಬಿ.ಐ.ಟಿ.ಎಂ ಗೆ ಪ್ರಥಮ ಸ್ಥಾನ
ಕಲಬುರಗಿ ವಲಯ ಮಟ್ಟದಲ್ಲಿ ಬರುವ ಕಾಲೇಜುಗಳ ಪೈಕಿ ಐದು ತಂಡಗಳು
ಈ ಟೂರ್ನಿಯಲ್ಲಿ ಭಾಗವಹಿಸಿದವು. ಬಳ್ಳಾರಿಯ ಆರ್.ವೈ.ಎಂ.ಇ.ಸಿ, ಬಿ.ಐ.ಟಿ.ಎಂ, ಮುಧೋಳದ
ಬಿಜಿಎಂಐಟಿ, ವಿಜಯಪುರದ ಡಾ.ಪಿ.ಜಿ.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು ಹಾಗೂ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ತಂಡಗಳು ಈ ಪಂದ್ಯಾವಳಿಯಲ್ಲಿ
ಭಾಗವಸಿದ್ದವು. ಇಂದು ಮಾರ್ಚ್ ೩ರಂದು ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಬಳ್ಳಾರಿಯ ಬಳ್ಳಾರಿ
ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (ಬಳ್ಳಾರಿಯ ತಂಡವು ರಾವ್ ಬಹದ್ದೂರ್ ವೈ
ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ತಂಡವನ್ನು 9-9 ಹಾಗೂ 9-6 ಸೆಟ್ ಗಳಲ್ಲಿ,
ಅಂದರೆ 3 ಅಂಕಗಳಿಂದ ಮಣಿಸಿ ಪ್ರಥಮ ಸ್ಥಾನ ಪಡೆಯಿತು. ಬಳ್ಳಾರಿಯ
ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ತಂಡ ದ್ವಿತೀಯ ಸ್ಥಾನ ಪಡೆಯಿತು. ಅತಿಥೇಯ
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ತೃತೀಯ ಸ್ಥಾನ ಪಡೆಯಿತು.
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ
ಅಧ್ಯಕ್ಷರಾದ ಕುಂಟೆ ಬಸವರಾಜ್ ಜಾನೆ ಕುಂಟೆ ಹಾಗೂ ಪ್ರಾಂಶುಪಾಲ ಡಾಕ್ಟರ್ ಎಸ್ ಎಮ್ ಶಶಿಧರ್ ಅವರು
ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಕಾಲೇಜಿನ
ದೈಹಿಕ ನಿರ್ದೇಶಕ ಕೆ.ಎಸ್.ಮಂಜುನಾಥ, ಅಧ್ಯಾಪಕರಾದ ಪ್ರಮೋದ್, ಗಿರೀಶ್ ಮುಂತಾದವರು
ಉಪಸ್ಥಿತರಿದ್ದರು.
Figure 1 1st Place BITM Ballari
ಹೊಸಪೇಟೆಯ ಪಿಡಿಐಟಿಯಲ್ಲಿ ಆಯೋಜಿಸಲಾಗಿದ್ದ ವಿಟಿಯು ವಲಯ ಮಟ್ಟದ ಖೋ-ಖೋ ಟೂರ್ನಮೆಂಟ್
ನಲ್ಲಿ ಪ್ರಥಮ ಸ್ಥಾನ ಪಡೆದ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ತಂಡಕ್ಕೆ
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಜಾನೆಕುಂಟೆ ಬಸವರಾಜ್ ಹಾಗೂ
ಪ್ರಾಂಶುಪಾಲ ಡಾ. ಎಸ್. ಎಂ. ಶಶಿಧರ್ ಅವರು ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
Figure 2 2nd Place RYMEC Ballari
ಹೊಸಪೇಟೆಯ ಪಿಡಿಐಟಿಯಲ್ಲಿ ಆಯೋಜಿಸಲಾಗಿದ್ದ ವಿಟಿಯು ವಲಯ ಮಟ್ಟದ ಖೋ-ಖೋ ಟೂರ್ನಮೆಂಟ್
ನಲ್ಲಿ ದ್ವಿತೀಯ ಸ್ಥಾನ ಪಡೆದ ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್
ಕಾಲೇಜಿನ ತಂಡಕ್ಕೆ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಜಾನೆಕುಂಟೆ
ಬಸವರಾಜ್ ಹಾಗೂ ಪ್ರಾಂಶುಪಾಲ ಡಾ. ಎಸ್. ಎಂ. ಶಶಿಧರ್ ಅವರು ಟ್ರೋಫಿ ಹಾಗೂ ಪ್ರಶಸ್ತಿ
ಪತ್ರಗಳನ್ನು ವಿತರಿಸಿದರು.
Figure 3 3rd Place PDIT
ಹೊಸಪೇಟೆಯ ಪಿಡಿಐಟಿಯಲ್ಲಿ ಆಯೋಜಿಸಲಾಗಿದ್ದ ವಿಟಿಯು ವಲಯ ಮಟ್ಟದ ಖೋ-ಖೋಟೂರ್ನಮೆಂಟ್
ನಲ್ಲಿ ತೃತೀಯ ಸ್ಥಾನ ಪಡೆದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ತಂಡಕ್ಕೆ ಪಿಡಿಐಟಿಯ ಆಡಳಿತ
ಮಂಡಳಿ ಅಧ್ಯಕ್ಷರಾದ ಜಾನೆಕುಂಟೆ ಬಸವರಾಜ್ ಹಾಗೂ ಪ್ರಾಂಶುಪಾಲ ಡಾ. ಎಸ್. ಎಂ. ಶಶಿಧರ್ ಅವರು ಟ್ರೋಫಿ
ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯವು ಆಯೋಜಿಸಿರುವ
ಎರಡು ದಿನಗಳ ಕಲಬುರಗಿ ವಲಯಮಟ್ಟದ ಇಂಜಿನಿಯರಿಂಗ್ ಕಾಲೇಜುಗಳ
ಪುರುಷರ ಖೋ-ಖೋ ಪಂದ್ಯಾವಳಿ ಶುಕ್ರವಾರ ಮತ್ತು ಶನಿವಾರ ಜರುಗಿತು. ಕರ್ನಾಟಕ
ಕ್ರೀಡಾ ಪ್ರಾಧಿಕಾರದ ಖೋ ಖೋ ತರಬೇತಿದಾರರಾದ ಯತಿರಾಜ್ ಎನ್ ಅವರು ಖೋ-ಖೋ ಪಂದ್ಯಾವಳಿಗೆ ಚಾಲನೆ
ನೀಡಿದರು.