1 ಮತ್ತು 2ರಂದು ವಿಟಿಯು ಕಲಬುರಗಿ ವಲಯಮಟ್ಟದ ಇಂಜಿನಿಯರಿಂಗ್ ಕಾಲೇಜುಗಳ ಪುರುಷರ ಖೋ-ಖೋ ಪಂದ್ಯಾವಳಿ

1 ಮತ್ತು 2ರಂದು ವಿಟಿಯು ಕಲಬುರಗಿ ವಲಯಮಟ್ಟದ 
ಇಂಜಿನಿಯರಿಂಗ್ ಕಾಲೇಜುಗಳ ಪುರುಷರ ಖೋ-ಖೋ ಪಂದ್ಯಾವಳಿ
       ಬಳ್ಳಾರಿ ವೀ.ವಿ.ಸಂಘದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಾರ್ಚ್  1 ಮತ್ತು 2ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಅಡಿಯಲ್ಲಿ ಬರುವ ಕಲಬುರಗಿ ವಲಯಮಟ್ಟದ ಇಂಜಿನಿಯರಿಂಗ್ ಕಾಲೇಜುಗಳ ಪುರುಷರ ಖೋ-ಖೋ ಪಂದ್ಯಾವಳಿಗಳು ನಡೆಯಲಿವೆ. 

        ಕಲಬುರಗಿ ವಲಯ ಮಟ್ಟದಲ್ಲಿ ಬರುವ ಏಳು ಕಾಲೇಜುಗಳ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ. ಬಳ್ಳಾರಿಯ ಆರ್.ವೈ.ಎಂ.ಇ.ಸಿ, ಬಿ.ಐ.ಟಿ.ಎಂ, ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು, ಮುಧೋಳದ ಬಿಜಿಎಂಐಟಿ, ವಿಜಯಪುರದ ಡಾ.ಪಿ.ಜಿ.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು, ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜು ಹಾಗೂ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. 
        ಈ ಖೋ-ಖೋ ಪಂದ್ಯಾವಳಿಗಳ ಉದ್ಘಾಟನೆಯನ್ನು 1ನೇ ಮಾರ್ಚ್ ಶುಕ್ರವಾರದಂದು ಯತಿರಾಜ್.ಎ.ಎನ್, ಎನ್‍ಐಎಸ್, ಖೋ-ಖೋ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ತರಬೇತುದಾರರು ಕೊಪ್ಪಳ ಇವರು ನೆರವೇರಿಸಲಿದ್ದಾರೆ.

          ಮಹಾವಿದ್ಯಾಲಯದ ಆಡಳಿತ ಮಂಡಳಿ ಆಧ್ಯಕ್ಷರಾದ ಜಾನೇಕುಂಟೆ ಬಸವರಾಜರವರು ಅಧ್ಯಕ್ಷತೆ ವಹಿಸಿಲಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಏಕಾಮರೇಶ್ ತಾಂಡೂರು ಹಾಗೂ ಜೆ.ಎಸ್.ಸತೀಶ್ ಪಾಲ್ಗೊಳ್ಳಲಿದ್ದಾರೆ.  ಪ್ರಾಂಶುಪಾಲರಾದ ಡಾ. ಎಸ್.ಎಂ.ಶಶಿಧರ್ ಮತ್ತು ದೈಹಿಕ ಶಿಕ್ಷಕ ನಿರ್ದೇಶಕರಾದ ಶ್ರೀ ಕೆ.ಎಸ್.ಮಂಜುನಾಥರವರು ಕಾರ್ಯಕ್ರಮದ ಮಾರ್ಗದರ್ಶಕರಾಗಿರುತ್ತಾರೆ.


      (ಕೆ.ಎಸ್.ಮಂಜುನಾಥ)          (ಡಾ.ಎಸ್.ಎಂ.ಶಶಿಧರ್)
    ದೈಹಿಕ ಶಿಕ್ಷಕ ನಿರ್ದೇಶಕರು          ಪ್ರಾಂಶುಪಾಲರು