ಪಿಡಿಐಟಿಯಲ್ಲಿ ರೊಬೋಟಿಕ್ ಕಾರ್ಯಾಗಾರ

ಪಿಡಿಐಟಿಯಲ್ಲಿ ರೊಬೋಟಿಕ್ ಕಾರ್ಯಾಗಾರ

ಹೊಸಪೇಟೆ: ೧೭
ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್ ಹಾಗು ವಿದ್ಯುನ್ಮಾನ ವಿಭಾಗದಿಂದ ಎರಡು ದಿನದ ರೊಬೋಟಿಕ್ ಕಾರ್ಯಾಗಾರವನ್ನು ವಿದ್ಯಾರ್ಥಿಗಳಿಗೆ ದಿನಾಂಕ ೧೮ ಮತ್ತು ೧೯ ರಂದು ಆಯೋಜಿಸಲಾಗಿದೆ.
ವೋಲ್ಟ್-ಸ್ಪೇಸ್ ಬೆಂಗಳೂರು ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ರೊಬೋಟಿಕ್ ಕಾರ್ಯಾಗಾರದಲ್ಲಿ ಲೈನ್ ಫಾಲೋಯರ್, ಅಬ್‌ಸ್ಟೆಕಲ್ ಡಿಟೆಕ್ಟರ್ ಹಾಗು ವಾಲ್ ಫಲೋಯರ್ ಎಂಬ ವಿವಿಧ ರೊಬೋಟನ್ನು ತಯಾರಿಸಲು ಪ್ರಾಯೋಗಿಕವಾಗಿ ತರಬೇತಿಯನ್ನು ಬೆಂಗಳೂರಿನ ರೊಬೋಟಿಕ್ ತಜ್ಞರಾದ ಲಕ್ಷಣ್ ಹಾಗು ಶ್ರೀನಿವಾಸನ್‌ಬ್ ಅವರು ನೀಡಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಜಾನೇಕುಂಟೆ ಬಸವರಾಜ್‌ರವರು ನಡೆಸಿಕೊಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎಂ.ಶಶಿಧರ್, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಪ್ರೊ.ಮಧ್ವರಾಜ್ ಹಾಗು ಕಾರ್ಯಕ್ರಮದ ಸಂಚಾಲಕರಾದ ಪ್ರೊ.ಫರ‍್ದೋಶ್ ಪರ‍್ವಿನ್ ಹಾಗು ಪ್ರೊ.ಶಾಂತಕುಮಾರ್ ಉಪಸ್ಥಿತರಿರುತ್ತಾರೆ. ಈ ಕಾರ್ಯಗಾರದಲ್ಲಿ ೬೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

- ಡಾ.ಎಸ್.ಎಂ.ಶಶಿಧರ್, ಪ್ರಾಂಶುಪಾಲರು, ಪಿಡಿಐಟಿ,  ಹೊಸಪೇಟೆ