'ಸ್ಟಾಕ್  ಮಾರುಕಟ್ಟೆ  ಹಾಗು ವಿಶ್ಲೇಷಣೆ’ ಕುರಿತ ಎರಡು ದಿನಗಳ ಕಾರ್ಯಗಾರ


ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಸ್ಟಾಕ್  ಮಾರುಕಟ್ಟೆ  ಹಾಗು ಅದರ ತಾಂತ್ರಿಕ ವಿಶ್ಲೇಷಣೆ’ ಕುರಿತ ಎರಡು ದಿನಗಳ ಕಾರ್ಯಗಾರ

ಷೇರು ಮಾರುಕಟ್ಟೆಯವಹಿವಾಟು ಜ್ಞಾನ ಅತ್ಯವಶ್ಯ

-ಡಾ. ಜಿ.ಕೆ.ಚೇತನ್

 

ಷೇರು ಮಾರುಕಟ್ಟೆಗಳು ಅರ್ಥಿಕ ಸ್ವಾಸ್ಥ್ಯದ, ಅಭಿವೃದ್ಧಿಯ ದಿಕ್ಸೂಚಿಗಳಾಗಿದ್ದು, ಷೇರು ಮಾರುಕಟ್ಟೆಯ ವಹಿವಾಟು ಜ್ಞಾನ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಅತ್ಯವಶ್ಯವಾಗಿದೆ ಎಂದು ಪುಣೆಯ ಕಿರ್ಲೋಸ್ಕರ್ ಮ್ಯಾನೇಜ್ಮೆಂಟ್ ಸಂಸ್ಥೆಯ ಪ್ರಾಧ್ಯಾಪಕ ಡಾ. ಜಿ.ಕೆ.ಚೇತನ್ ತಿಳಿಸಿದರು.

ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಸ್ಟಾಕ್  ಮಾರುಕಟ್ಟೆ ಹಾಗು ಅದರ ತಾಂತ್ರಿಕ ವಿಶ್ಲೇಷಣೆ’ ಕುರಿತ ಎರಡು ದಿನಗಳ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

 ಸ್ಟಾಕ್ ಮಾರ್ಕೆಟ್ ಇಲ್ಲದ ವಾಣಿಜ್ಯ ವಹಿವಾಟು ಊಹಿಸಿಕೊಳ್ಳಲು ಅಸಾಧ್ಯ ಎನ್ನುವ ಮಟ್ಟಿಗೆ ಇವು ಬೆಳೆದಿವೆ.ಉದ್ಯಮವನ್ನ ಬೆಳೆಸಿವೆ.   

ವಿದ್ಯಾರ್ಥಿಗಳು ಮಾರುಕಟ್ಟೆ  ವಿಶ್ಲೇಷಣೆಯ ಅರಿವು ಬೆಳೆಸಿಕೊಂಡರೆ ಕಾರ್ಪೋರೇಟ್ ಕಂಪನಿಗಳಲ್ಲಿ ಉದ್ಯೋಗ ಪಡೆಯಲು, ಯಶಸ್ಸ್ಸು ಗಳಿಸಲು ಸಾಧ್ಯ ಎಂದು ಅವರು ತಿಳಿಸಿದರು.

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಎಂ.ಶಶಿಧರ್ ಮಾತನಾಡಿ ಸ್ಟಾಕ್  ಮಾರುಕಟ್ಟೆ ಸಂಪೂರ್ಣ ಗಣಕೀಕೃತವಾಗಿದೆ. ತಾಂತ್ರಿಕತೆ ಹಾಗೂಮಾರುಕಟ್ಟೆ ಎರಡರಲ್ಲಿಯೂ ಪರಿಣತಿ ಹೊಂದಿದರೆ ಹೆಚ್ಚಿನ ಉದ್ಯೋಗ ಅವಕಾಶಗಳಿವೆ. ಷೇರು ಮಾರುಕಟ್ಟೆಯವಿಶ್ಲೇಷಣೆಯಿಂದ, ಬಂಡವಾಳ ಹೂಡುವ ಲಾಭ ಸಂಪಾದಿಸುವ ಪರಿಣತಿ ಗಳಿಸಬಹುದು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಜಾನೇಕುಂಟೆ ಬಸವರಾಜ ಮಾತನಾಡಿ ತಾಂತ್ರಿಕ ಹಾಗೂ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಕೌಶಲ್ಯದ ಅಗತ್ಯವಿದ್ದು ಪಿಡಿಐಟಿಯು ಅಗತ್ಯ ಕೌಶಲ್ಯ ತರಬೇತಿ ನೀಡುತ್ತಿದೆ ಎಂದು ತಿಳಿಸಿದರು.

ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಪ್ರೊ. ರವಿ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಪ್ರೊ.ಸಿದ್ಧಲಿಗೇಶ್ವರ ಸ್ವಾಗತಿಸಿದರು. ಕೊನೆಯಲ್ಲಿ ಅಧ್ಯಾಪಕ ಉದಯ ಶಂಕರ್ ವಂದಿಸಿದರು.