ಪಿಡಿಐಟಿಯಲ್ಲಿ ಸದ್ಭಾವನಾ ದಿನಾಚರಣೆ

ಪಿಡಿಐಟಿಯಲ್ಲಿ ಸದ್ಭಾವನಾ ದಿನಾಚರಣೆ
ಜಾತ್ಯಾತೀತತೆ ಭಾರತೀಯ ಪರಂಪರೆಯ ಹೆಗ್ಗುರುತು
“ಜಾತ್ಯಾತೀತತೆಯ ಅಂಶ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಮೊದಲಿನಿಂದಲು ಬಂದಿದೆ, ಜಾತ್ಯಾತೀತತೆ ಭಾರತೀಯ ಹೆಗ್ಗುರುತು”  ಎಂದು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ ಎಸ್.ಎಂ.ಶಶಿಧರ್ ತಿಳಿಸಿದರು.
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಆಯೋಜಿಸಲಾಗಿದ್ದ ಸದ್ಭಾವನಾ ದಿನಾಚರಣೆ ಸಂದರ್ಭದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡುತ್ತಿದ್ದರು. 









ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ೭೨ನೇ ಜನ್ಮ ಜಯಂತಿಯನ್ನು  ಸದ್ಭಾವನಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಜಾತಿ, ಧರ್ಮ, ಪ್ರದೇಶ, ಮತ, ಭಾಷೆಯ ಮೊದಲಾದ ಯಾವುದೇ ಭೇದ ಭಾವವಿಲ್ಲದೆ ಭಾರತದ ಎಲ್ಲಾ ಜನತೆಯು ಭಾವೈಕ್ಯ ಮತ್ತು ಸೌಹಾರ್ದತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ವೈಯಕ್ತಿಕವಾಗಿಯಾಗಲಿ, ಸಾಮೂಹಿಕವಾಗಿಯಾಗಲಿ ಸಮಾಜದಲ್ಲಿರುವ ಬೇಧಭಾವಗಳು, ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಂದಾಗಬೇಕು ಎಂದು ಅವರು ಪ್ರತಿಜ್ಞೆ ಬೋಧಿಸಿದರು.
ಎನ್.ಎಸ್.ಎಸ್. ಘಟಕದ ಸಂಚಾಲಕರಾದ ಆರ್. ನವೀನ, ಹಿರಿಯ ಅಧ್ಯಾಪಕರಾದ ಪ್ರತಾಪ್ ಕುಲಕರ್ಣಿ, ಡಾ. ಶಿವಕೇಶವ ಕುಮಾರ್, ಚಕ್ರಸಾಲಿ ಮುಂತಾದವರು ಉಪಸ್ಥಿತರಿದ್ದರು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.