To,
ಡಿವಿಜಿನಲ್ ಕಂಟ್ರೋಲರ್,
ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ,
ಹೊಸಪೇಟೆ.
ಮಾನ್ಯರೇ,
ವಿಷಯ:- ವಾಹನ ಕೋರಿಕೆ ನಿಲುಗಡೆ ಸೇವೆ ಒದಗಿಸುವ ಕುರಿತು ಮನವಿ.
****
ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂದಿಸಿದಂತೆ, ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಮ್ಮ ಕಾಲೇಜಿನಲ್ಲಿ ಸುಮಾರು 1500 ವಿದ್ಯಾರ್ಥಿ/ ವಿದ್ಯಾರ್ಥಿನಿಯರು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು ಬಹುತೇಕರು ಗ್ರಾಮೀಣ ಪ್ರದೇಶಗಳಿಂದ ಪ್ರಯಾಣಿಸುತ್ತಿದ್ದಾರೆ. ಅಂದರೆ ಕೊಪ್ಪಳ, ಮುನಿರಾಬದ್, ಹುಲಗಿ, ಹಿಟ್ನಾಳ್, ಹೊಸಹಳ್ಳಿ, ಗಿಣಿಗೇರಾದಿಂದ ಪ್ರಯಾಣಿಸುತ್ತಿರುತ್ತಾರೆ.
ಕರ್ನಾಟಕ ರಾಜ್ಯದ ಸಾರಿಗೆ ವಾಹನಗಳು ಸಾಯಿ ಬಾಬ ದೇವಸ್ಥಾನದ ಹತ್ತಿರ ನಿಲುಗಡೆ ಇದ್ದು, ಇದು ನಮ್ಮ ಕಾಲೇಜಿನಿಂದ 1 ಕಿ.ಮೀ. ದೂರವಿರುತ್ತದೆ. ಇದರಿಂದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ.
ಆದ್ದರಿಂದ ತಾವುಗಳು ದಯಮಾಡಿ ನಮ್ಮ ಕಾಲೇಜಿಗೆ ಕೋರಿಕೆ ಮೇರೆಗೆ ಸಾರಿಗೆ ಬಸ್ಸು ಏರಲು ಮತ್ತು ನಿಲ್ಲಿಸಲು ಮಂಜೂರು ಮಾಡಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ ಬೇಡಿಕೊಳ್ಳುತ್ತೇವೆ.
ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿಗಳು,
ಎಸ್.ಎಂ.ಶಶಿಧರ್
ಪ್ರಾಂಶುಪಾಲರು
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ,
ಹೊಸಪೇಟೆ.