'Heegondu Prema kathe' is a kannada short movie, directed by Suzan Honnalli, based on true love story!
ಪಿಡಿಐಟಿಯ ಪ್ರತಿಭೆಗಳು ನಿರ್ಮಿಸಿದ ಕಿರು ಚಿತ್ರ 'ಹೀಗೊಂದು ಪ್ರೇಮ ಕಥೆ' ೧೪ ರಂದು ಮಲ್ಲಿಗೆ ಸಭಾಂಗಣದಲ್ಲಿ ಪ್ರೀಮಿಯರ್ ಶೋ ಮೂಲಕ ಬಿಡುಗಡೆಯಯಿತು. ನಮ್ಮ Creative ಹುಡುಗರ ಟೀಮ್ ನಿರ್ಮಿಸಿದ ಈ ಚಿತ್ರಕ್ಕೆ ಪಿಡಿಐಟಿಯ ಪರವಾಗಿ ಅಭಿನಂದನೆಗಳು.
ನಿರ್ಮಾಣದ ಪ್ರತಿ ಹಂತದಲ್ಲಿ ನನಗೆ ಮಾಹಿತಿ ನೀಡುತ್ತಾ, ಪ್ರೀತಿ, ಅಭಿಮಾನ ತೋರಿದ ಅವರಿಗೆ ನನ್ನ ಕೃತಜ್ಞತೆಗಳು. ಎಂಜಿನೀಯರಿಂಗ್ ಪದವೀಧರರಾಗಿರುವ ಈ ಪ್ರತಿಭೆಗಳು, ಚಿತ್ರ ನಿರ್ಮಾಣದ ಎಲ್ಲಾ ಅಯಾಮಗಳನ್ನೂ ಕರಗತ ಮಾಡಿಕೊಂಡಿರುವುದು ನನಗೆ ಸೋಜಿಗದ ಸಂಗತಿ. ಕೊಟ್ಟೂರು ಜಾತ್ರೆಯಲ್ಲಿ ನಾನು ಅಮ್ಮನೊಂದಿಗೆ ಇರಲೇಬೇಕಾಗಿದ್ದ ಪ್ರಯುಕ್ತ, ೧೪ ರಂದು ಪ್ರೀಮಿಯರ್ ಶೋನಲ್ಲಿ ಭಾಗವಹಿಸಲು ಆಗಲಿಲ್ಲ. ಸಾರಿ, ಮೈ ಬಾಯ್ಸ್! ಪತ್ರಿಕೆಯಲ್ಲಿ ಬಂದಿರುವ ವರದಿಗಳು ತುಂಬಾ ಉತ್ತೇಜಕವಾಗಿವೆ. ನಿಮಗೆ ನನ್ನ ಶುಭಾಶಯಗಳು.
-ಎಸ್.ಎಂ.ಶಶಿಧರ, ಪ್ರಾಂಶುಪಾಲರು, ಪಿಡಿಐಟಿ, ಹೊಸಪೇಟೆ.
ಕಿರಣ್-ಅನಿಲ್ ನಿರ್ಮಿಸುತ್ತಿರುವ ಮುಂಬರುವ ಚಿತ್ರ