Web Development workshop in Press

ಹೊಸಪೇಟೆ; ಆನ್‌ಲೈನ್ ವ್ಯವಹಾರ ಕ್ಷೇತ್ರ ವ್ಯಾಪಕವಾಗುತ್ತಿರುವುದರಿಂದ ಇ-ಕಾಮರ್ಸ್ ಜಾಲತಾಣ ರೂಪಿಸುವ ತಂತ್ರಜ್ಞರಿಗೆ ಬೇಡಿಕೆ ಹೆಚ್ಚಿದೆ ಎಂದು ಹೊಸದಿಲ್ಲಿಯ 'ಫಿನ್‌ಲ್ಯಾಂಡ್ ಲ್ಯಾಬ್ ಸಂಸ್ಥೆ'ಯ ತರಬೇತುದಾರ ರವಿಕುಮಾರ್ ಹೇಳಿದರು. 




ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ರೂರ್ಕಿಯ ಐ.ಐ.ಟಿ. ಸಹಯೋಗದೊಂದಿಗೆ ಆಯೋಜಿಸಿರುವ 'ವೆಬ್ ಡೆವೆಲಪ್‌ಮೆಂಟ್' ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿ, ''ಜಾಲತಾಣಗಳನ್ನು ನಿರ್ಮಿಸಿ ನಿರ್ವಹಿಸುವ ತಂತ್ರಜ್ಞಾನ ಕಲಿಯಲು ಸುಲಭ ಮಾರ್ಗಗಳು ಲಭ್ಯವಾಗುತ್ತಿವೆ. ತಾಂತ್ರಿಕ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಇತರ ವಿದ್ಯಾರ್ಥಿಗಳೂ ಲಭ್ಯ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬಹುದು'' ಎಂದರು. 

ಪಿಡಿಐಟಿಯ ಪ್ರಾಂಶುಪಾಲ ಪ್ರೊ.ಎಸ್.ಎಂ.ಶಶಿಧರ್, ಪಿಡಿಐಟಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ವಸಂತಮ್ಮ ಜಿ., ಕಾರ್ಯಾಗಾರ ಸಂಯೋಜಕ ಪ್ರೊ.ಮಾಲತೇಶ್ ಮತ್ತು ಡಾ.ವೀರಬಸಂತ ಸ್ವಾಮಿ ಇತರರಿದ್ದರು.