IOT skills are prime to build intelligent society with things

ಈ ದಿನದ ಪತ್ರಿಕಾ ವರದಿ


ಎರಡು ದಿನಗಳ ವಿಟಿಯು ಪ್ರಾಯೋಜಿತ ರಾಜ್ಯಮಟ್ಟದ ಐಓಟಿ ಕಾರ್ಯಾಗಾರ

“ಬದುಕನ್ನು ಸ್ಮಾರ್ಟ್ ಮಾಡಲಿರುವ ಐಓಟಿ”

‘ಐಒಟಿ ತಂತ್ರಜ್ಞಾನವು ಮಾನವ ಬದುಕನ್ನು ಮತ್ತಷ್ಟು ಸ್ಮಾರ್ಟ್ ಮಾಡಲಿದೆ ಎಂದು ಬೆಂಗಳೂರಿನ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಬಾಲಕೃಷ್ಣ ಅಭಿಪ್ರಾಯಪಟ್ಟರು.

   ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿ.ಟಿ.ಯು. ಪ್ರಾಯೋಜಿತ ಟೆಕ್ಯುಪ್ ೧.೩ ಯೋಜನೆ ಅಡಿಯಲ್ಲಿ ಐಓಟಿ ವಿಷಯದ ಮೇಲೆ ರಾಜ್ಯಮಟ್ಟದ ಎರಡು ದಿನಗಳ ಕಾರ್ಯಾಗಾರವನ್ನು ಶನಿವಾರದಂದು ಉದ್ಘಾಟಿಸಿ ಮಾತನಾಡುತ್ತಿದ್ದರು.

“ಉಪಕರಣಗಳ ಮಾನವಿಕ ನಿಯಂತ್ರಣ ಕಡಿಮೆಯಾಗಿ, ಅವು ತಾವಾಗಿಯೇ ನಮ್ಮ ಅವಶ್ಯಕತೆಗಳನ್ನು ಅರಿತು ಕಾರ್ಯನಿರ್ವಹಿಸಲಿವೆ. ನಾವೆಲ್ಲರೂ ಆಟೊಮೆಟೆಡ್ ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗುವಂಥ ಭವಿಷ್ಯದ ಹೊಸ್ತಿಲಲ್ಲಿ ನಿಂತಿದ್ದೇವೆ. ಇಂಟರ್ನೆಟ್ ಆಫ್ ಥಿಂಗ್ಸ್ ಕ್ಷೇತ್ರದಲ್ಲಿ ಅನೇಕ ಆವಿಷ್ಕಾರಗಳಾಗಿವೆ. ಸ್ಮಾರ್ಟ್ ಹಾಸ್ಪಿಟಲ್ ಬೆಡ್ಗಳು, ಫಿಟ್ನೆಸ್ ಮಟ್ಟವನ್ನು ಗುರುತಿಸುವ ವಾಚ್ಗಳು, ಸ್ಮಾರ್ಟ್ ಮನೆಗಳು, ಸ್ಮಾರ್ಟ್ ಕಾರ್‌ಗಳು, ಸ್ಮಾರ್ಟ್ ಬೈಕ್‌ಗಳು ಸರ್ವೇ ಸಾಮಾನ್ಯವಾಗಲಿವೆ. ೨೦೨೨ರ ವೇಳೆಗೆ ೨೦ ಕೋಟಿ ಮನೆಗಳಲ್ಲಿ ಸ್ಮಾರ್ಟ್ ಉಪಕರಣಗಳು ಪ್ರವೇಶಿಸಲಿವೆ ಎನ್ನುವ ಅಂದಾಜಿದೆ” ಎಂದು ಅವರು ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಎಸ್. ಎಂ. ಶಶಿಧರ ಮಾತನಾಡಿ ಐಒಟಿ ತಂತ್ರಜ್ಞಾನವು ಪ್ರಸ್ತುತ ೪ ನೇ ತಲೆಮಾರಿನ ಉದ್ಯಮ ಕ್ರಾಂತಿಯಲ್ಲಿ ನಮ್ಮ ದೈನಂದಿನ ಜೀವನದ ಭಾಗವಾಗಿದೆ ಮತ್ತು ಅದರ ಬಳಕೆ ಮುಂದಿನ ದಶಕದಲ್ಲಿ ತೀವ್ರ ಹೆಚ್ಚಾಗಲಿದೆ. ಮಾನವ ಭಾವನೆಗಳೊಂದಿಗೆ ಸಂಯೋಜಿಸಲ್ಪಟ್ಟ ಐಒಟಿಯೊಂದಿಗೆ ಸಾಧನಗಳು ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸುತ್ತವೆ. ವಸ್ತುಗಳ ಅಂತರ್ಜಾಲಕ್ಕೆ ಉತ್ತಮ ಭವಿಷ್ಯವಿದ್ದು ವಿದ್ಯಾರ್ಥಿಗಳು ಪರಿಣತಿ ಗಳಿಸಬೇಕು ಎಂದು ಅಭಿಪ್ರಾಯಪಟ್ಟರು.

ಡೀನ್ ಡಾ ಯು ಎಂ ರೋಹಿತ್ ಮಾತನಾಡಿ, ಐಒಟಿ ತಂತ್ರಜ್ಞಾನ ದಲ್ಲಿ ಸುರಕ್ಷತೆ ಮತ್ತು ಗೌಪ್ಯತೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಎಂದು ಹೇಳಿದರು. ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಜಾನೆಕುಂಟೆ ಬಸವರಾಜ್ ಮಾತನಾಡಿ ‘ಐಒಟಿ, ಮೆಷಿನ್ ಲರ್ನಿಂಗ್, ಮುಂತಾದ ಭರವಸೆಯ ತಂತ್ರಜ್ಞಾನಗಳ ಶಿಕ್ಷಣ ಪಡೆಯುವ ಮೂಲಕ ವಿದ್ಯಾರ್ಥಿ ಸಮಕಾಲೀನ ಜ್ಞಾನದೊಂದಿಗೆ ನವೀಕರಣಗೊಳ್ಳಬೇಕು’ ಎಂದರು.

ಇನ್ನೋರ್ವ ಅತಿಥಿ, ಬೆಂಗಳೂರಿನ ಯುವಿಸಿಇಯ ಪ್ರಾಧ್ಯಾಪಕ ಡಾ.ವೆಂಕಟೇಶ್ ಅವರು ‘ವಿದ್ಯಾರ್ಥಿಗಳಿಗೆ ಪ್ರಸ್ತುತ ಉದ್ಯೋಗ ಕ್ಷೇತ್ರದಲ್ಲಿ ಅವಕಾಶಗಳನ್ನು ಪಡೆದುಕೊಳ್ಳಲು ೬೦% ವರ್ತನೆ, ೨೦% ಕೌಶಲ್ಯ ಮತ್ತು ೨೦% ಸಂವಹನ ಸಾಮರ್ಥ್ಯಗಳನ್ನು ಆಪೇಕ್ಷಿಸಲಾಗುತ್ತದೆ’ ಎಂದರು. ಆಡಳಿತ ಮಂಡಳಿ ಸದಸ್ಯ ಶ್ರೀ ಎಕಾಮರೇಶ್ ತಾಂಡೂರ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ವಸಂತಮ್ಮ, ಕಾರ್ಯಾಗಾರದ  ಸಂಚಾಲಕರಾದ ಪ್ರೊ.ಮಾಲತೇಶ್.ಕೆ ಉಪಸ್ಥಿತರಿದ್ದರು.

ಬೆಂಗಳೂರು, ಮೈಸೂರು, ಶಿವಮೊಗ್ಗ, ಬೀದರ್, ದಾವಣಗೆರೆ ಮುಂತಾದ ಭಾಗಗಳಿಂದ ೭೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಕುಮಾರಿ ಪ್ರಿಯಾಂಕಾ ಪ್ರಾರ್ಥನೆ ಸಲ್ಲಿಸಿದರು.  ಅನುಷಾ ಎಸ್ ಸ್ವಾಗತಿಸಿದರು. ಅರ್ಷಿಯಾ, ನೇಹಾ ನಿರೂಪಿಸಿದರು. ಸ್ವಾತಿ ಅವರು ವಂದಿಸಿದರು.

Today's Press Report

VTU sponsored State level workshop on IOT at PDIT Hosapete
2rd Nov 2019

Venue: Dr A P J Abdul Kalam Hall,PDIT, Hosapete.

"IOT skills are prime to build intelligent society with things"

‘IOT technology will be the part of todays integrated approach towards the need of the human race and things they use’. Opined Dr Balakrishna R Principal RRIT Bangalore.
 He was addressing the two days VTU sponsored state level student employability program on Internet of Things [IOT] at PDIT Hosapete .   
He further said,’ Employability of student can be enhanced by learning IOT technology and for this there is a need to change in attitude of doing the things with relevant skill and understanding the nascent needs of the society.  Students should develop employability skill to be ready to absorb in the placement arena immediately. In this regard the students should keenly observe the needs of the todays generation and convert it into opportunity to cater it through IOT. IOT integrates the things and internet through minute needs of the society. Students innovative ideas can be transformed into patents to initiate the start up companies.’

Addressing the gathering Principal Dr S M Shashidhara said, ‘ IOT technology has already become part of our daily life in the present 4th generation of industry revolution and its use will be increasing exponentially within 10 years. Things will act intelligently with IOT integrated with human emotions.’

Dean of PDIT, Dr U M Rohith said,’IOT technology should be used taking utmost care about security and privacy of the people.  IOT smart cities, vehicles, hospitals etc will be in reality soon even in semi urban and rural areas’.

Delivering the presedential remarks, Chairman of PDIT Shri Janekunte Basavaraj said,’ Student should update with  contemporary knowledge by inculcating promising technologies like IOT, Machine Learning, Aurdino boards etc.

Guest of Honour,  Dr Venkatesh of UVCE, Bengaluru while addressing the gathering, ‘Students need 60% attitude, 20 % skills and 10% communication ability to grab the opportunities in current job sector. Governing body member Shri Ekamaresh Tandur addressed the students.  

HOD & staff of various departments, 70 participants of various colleges from Banglore, Mysore, Hasan , Bidar, Hulkoti, Shivamogga other institutes attended the program.   Kumari Anusha S welcomed and introduced the gathering.  Kumari Priyanka presented the invocation song.  Programme was anchored by Kumari Arshiya Neha. Vote of thanks was delivered by Kumari Swathi.

Thanks and Regards by
Press Committee.