ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಹೊಸಪೇಟೆ
PROUDHADEVARAYA INSTITUTE OF TECHNOLOGY, HOSAPETE
Inaugural Ceremony of three days state level workshop on ‘Aircraft & Aerospace Engineering’
“Government keen on Supporting Aircraft industry”
--Dr K Badarinarayan
Hosapete 25th October:
‘Government of Karnataka has a good support in the field of ‘Aircraft & Aerospace Engineering. Efforts are on to make India capable of manufacturing and also to the level of exporting of indigenous aircraft in near future ‘ Aviation scientist Dr K Badari Narayana opined on the occasion the opening three days state level workshop on ‘Aircraft & Aerospace Engineering’ organized in Proudhadevaraya Institute of Technology jointly organized with ‘Centre of Excellence in Aerospace & Defence, VTU Regional Office Bengaluru’.
He further said, ‘Safety has the highest priority in the aviation field and there are very few agencies to certify the Aircraft on global scale. Hence students of all branches can explore the career opportunities in this rare growing field. Dassault sytems Company has evolved 3D software which enables aviational design, manufacturing and safety with its full proof technical feasibility
Speaking on this occasion Aviation expert Sri Goutham K S opined that’ this workshop in interdisciplinary in nature and the present research need the cohesive efforts of all the stream of technical expertise.’
Delivering the presidential address, the Governing body member of PDIT Sri Ekamaresh A Tandur said, ‘the gap between the academics and the need of the industry is widening. Students should not be deprived from the new horizons of the knowledge. Such workshops will act as finishing school to aid the need of the industry.’
Addressing the gathering, Principal Dr S M Shashidhar said,’ Ballari has is a hub growing Industry sector and plenty of land has been acquired by the state government for Industrial purpose. This can be utilized to erect spare part industries needed for the aviation field. Exponential rise of vehicular population has led to the traffic jams. Hence to subside this problem, support should be given to the growth of domestic aviation in this prime Hyerabad Karnataka region.
Shri Movin Furtado, Head of Mechanical Engg Dr B H Manjunath, Head of Electrical & Electronics Engg Prof Madhwaraj, addressed the gathering.
Student of Mechanical Engg Sri Praveen delivered the prayer song. Prof S G Basavaraju welcomed the gathering. Prof Firdouse Parvin and Prof Vani R G anchored the program. Dr Veerbhadrappa Algur delivered vote of thanks. Over 150 students from different engineering colleges across the state are participating in this workshop.
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಹೊಸಪೇಟೆ.
ಪಿಡಿಐಟಿಯಲ್ಲಿ ವೈಮಾನಿಕ ಮತ್ತು ಅಂತರಿಕ್ಷ ತಂತ್ರಜ್ಞಾನ ಕುರಿತು ಕಾರ್ಯಾಗಾರದ ಉದ್ಘಾಟನೆ
ವೈಮಾನಿಕ ಸಂಶೋಧನಾ ಕ್ಷೇತ್ರಕ್ಕೆ ಸರಕಾರದಿಂದ ಉತ್ತೇಜನ
-ಡಾ.ಕೆ.ಬದರಿನಾರಾಯಣ
ಹೊಸಪೇಟೆ:
ಅಕ್ಟೋಬರ್ ೨೫
ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕ ಸರಕಾರವು ವಿಶೇಷ ಉತ್ತೇಜನ ನೀಡುತ್ತಿದ್ದು, ವಿಮಾನದ ಬಿಡಿಭಾಗಗಳ ತಯಾರಿಕೆಯಿಂದ ಹಿಡಿದು ದೇಶಿಯವಾಗಿ ವಿಮಾನಗಳನ್ನು ತಯಾರು ಮಾಡಿ ರಫ್ತು ಮಾಡುವ ದಿಶೆಯಲ್ಲಿ ಪ್ರಯತ್ನಗಳು ನಡೆದಿವೆ ಎಂದು ಬೆಂಗಳೂರಿನ ವೈಮಾನಿಕ ಮತ್ತು ಅಂತರಿಕ್ಷ ತಂತ್ರಜ್ಞ ಡಾ.ಕೆ.ಬದರಿನಾರಾಯಣರವರು ತಿಳಿಸಿದರು.
ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ಸೆಂಟರ್ ಫಾರ್ ಎಕ್ಸ್‌ಲನ್ಸ್ ಇನ್ ಎರೋಸ್ಪೇಸ್ ಅಂಡ್ ಡಿಫೆನ್ಸ್, ವಿ.ಟಿ.ಯು. ಪ್ರಾದೇಶಿಕ ಕಛೇರಿ, ಬೆಂಗಳೂರು ಇವರ ಸಹಯೋಗದಲ್ಲಿ ಅಕ್ಟೋಬರ್ ೨೫ ರಿಂದ ೨೭ ರವರೆಗೆ ಆಯೋಜಿಸಿರುವ ಮೂರು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಗುರುವಾರ ಡಾ. ಯು.ಆರ್. ರಾವ್ ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ವೈಮಾನಿಕ ಕ್ಷೇತ್ರದಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಧಾನ್ಯತೆ ಇದ್ದು, ಈ ಕ್ಷೇತ್ರದಲ್ಲಿ ಗುಣಮಟ್ಟವನ್ನು ಪ್ರಮಾಣೀಕರಿಸುವ ಸಂಸ್ಥೆಗಳು ಬೆರಳಣಿಕೆಯಷ್ಟಿವೆ. ಹಾಗಾಗಿ ದೇಶಿಯವಾಗಿ ಪರಿಣಿತ ತಂತ್ರಜ್ಞರ ಅವಶ್ಯಕತೆ ಇದ್ದು, ಎಲ್ಲಾ ವಿಭಾಗಗಳ ತಾಂತ್ರಿಕ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ಕಂಡುಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ವೈಮಾನಿಕ ಹಾಗೂ ಅಂತರಿಕ್ಷ ಕ್ಷೇತ್ರದಲ್ಲಿ ಇತ್ತೀಚೆಗೆ ಡೆಸಾಲ್ಟ್ ಸಿಸ್ಟಮ್ಸ್‌ನವರು ರೂಪಿಸಿರುವ ೩ಡಿ ದೃಶ್ಯ ತಂತ್ರಾಂಶವು ವಾಯು ಹಾಗು ಅಂತರಿಕ್ಷ ನೌಕೆಗಳ ವಿನ್ಯಾಸ, ನಿರ್ಮಾಣ ಹಾಗು ಸುರಕ್ಷತೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಇನ್ನೋರ್ವ ತಂತ್ರಜ್ಞರಾದ ಕೆ.ಎಸ್.ಗೌತಮ್ ಮಾತನಾಡಿ ಪ್ರಸಕ್ತ ಕಾರ್ಯಾಗಾರವು ಅಂತರ್‌ಶಿಸ್ತೀಯ ಸ್ವರೂಪದ್ದಾಗಿದ್ದು, ಎಲ್ಲಾ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಂಶುಪಾಲ ಡಾ.ಎಸ್.ಎಂ.ಶಶಿಧರ್ ಮಾತನಾಡಿ ಬಳ್ಳಾರಿ ಜಿಲ್ಲೆಯು ಔದ್ಯಮಿಕವಾಗಿ ಬೆಳೆಯುತ್ತಿದ್ದು ಸರಕಾರದ ಅಧೀನದಲ್ಲಿರುವ ಕೈಗಾರಿಕೆಗಾಗಿ ಗುರುತಿಸಿರುವ ಭೂಮಿಯಲ್ಲಿ ವೈಮಾನಿಕ ಬಿಡಿ ಭಾಗಗಳ ತಯಾರಿಕೆಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರವಾಗಿ ನಾಗರೀಕ ವಿಮಾನಯಾನಕ್ಕೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಆದ್ಯತೆ ದೊರೆಯಲಿದೆ. ಉಡಾನ್ ಸೌಲಭ್ಯದಿಂದ ವಿಮಾನಯಾನ ಸಾಮಾನ್ಯರ ಕೈಗೆಟುಕುತ್ತಿದೆ ಎಂದು ತಿಳಿಸಿದರು.
ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಏಕಾಮರೇಶ್ ತಾಂಡೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣ ಹಾಗು ಕೈಗಾರಿಕಾ ಕೌಶಲ್ಯಗಳ ನಡುವೆ ಅಂತರ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಪ್ರಸಕ್ತ ಔದ್ಯಮಿಕ ಸನ್ನಿವೇಶಕ್ಕೆ ಬೇಕಾಗುವ ಜ್ಞಾನದಿಂದ ವಂಚಿತರಾಗುತ್ತಿದ್ದಾರೆ. ಈ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇಂಥಹ ಕಾರ್ಯಾಗಾರಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ವಿದ್ಯುತ್ ವಿಭಾಗದ ಮುಖ್ಯಸ್ಥರಾದ ಪ್ರೊ.ಮಧ್ವರಾಜ್ ಮಾತನಾಡಿ ವಿಮಾನಯಾನದ ಕಲ್ಪನೆ ಪ್ರಾಚೀನವಾಗಿದ್ದು ಭಾರದ್ವಾಜ, ಆಗಸ್ತ್ಯ ಮುನಿಗಳ ಶಾಸ್ತ್ರ ಗ್ರಂಥಗಳಲ್ಲಿ ಉಲ್ಲೇಖವಿದೆ ಎಂದು ಹೇಳಿದರು. ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಹೆಚ್.ಮಂಜುನಾಥ ಮಾತನಾಡಿ ಭಾರತವು ಬಾಹ್ಯಾಕಾಶ ಸಂಶೋಧನೆಯಲ್ಲಿ ಜಾಗತಿಕವಾಗಿ ಮಂಚೂಣಿಯಲ್ಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಶ್ರೀ ಮೋವಿನ್ ಫರ‍್ಟಾಡೋ ಮಾತನಾಡಿದರು. ವಿದ್ಯಾರ್ಥಿ ಪ್ರವೀಣ್ ಪ್ರಾರ್ಥಿಸಿದರು. ಪ್ರೊ ಎಸ್.ಜಿ.ಬಸವರಾಜು ಸ್ವಾಗತಿಸಿದರು. ಪ್ರೊ ಫಿರ್ದೋಸ್ ಪರ‍್ವೀನ್ ಹಾಗು ಪ್ರೊ ಆರ್.ಜಿ.ವಾಣಿ ನಿರೂಪಣೆ ಮಾಡಿದರು. ಡಾ.ವೀರಭದ್ರಪ್ಪ ಅಲ್ಗೂರು ವಂದಿಸಿದರು. ರಾಜ್ಯದ ವಿವಿಧ ಇಂಜಿನೀಯರಿಂಗ್ ಕಾಲೇಜುಗಳ ೧೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.